Wednesday 27 October 2021

ನಾಗರ ಹಾವು

 


ಕನ್ನಡ ನಾಡಿನ ವೀರರಮಣಿಯ, ಗಂಡು ಭೂಮಿಯ ವೀರ ನಾರಿಯ, ಚರಿತೆಯ ನಾನು ಹಾಡುವೆ...(ನಾಗರ ಹಾವು)

ಚಿತ್ರ: ನಾಗರಹಾವು...(1972)
ಸಾಹಿತ್ಯ: ಸಾಹಿತ್ಯರತ್ನ. ಚಿ॥ ಉದಯಶಂಕರ್....
ಗಾಯಕರು: ಡಾ॥ ಪಿ. ಬಿ. ಶ್ರೀನಿವಾಸ್...
------------------------------------------
ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...
ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ಚಿತ್ರದುರ್ಗದ ಕಲ್ಲಿನ ಕೋಟೆ,
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ...
ಚಿತ್ರದುರ್ಗದ ಕಲ್ಲಿನ ಕೋಟೆ,
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ...
ಮದಿಸಿದ ಕರಿಯ ಮದವಡಗಿಸಿದ,
ಮದಕರಿ ನಾಯಕರಾಳಿದ ಕೋಟೆ...
ಪುಣ್ಯ ಭೂಮಿಯು ಈ ಬೀಡು,
ಸಿದ್ದರು ಹರಸಿದ ಸಿರಿನಾಡು...

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ....

ವೀರಮದಕರಿ ಆಳುತಲಿರಲು,
ಹೈದಾರಾಲಿಯು ಯುಧ್ಧಕೆ ಬರಲು...
ಕೋಟೆ ಜನಗಳ ರಕ್ಷಿಸುತಿರಲು,
ಸತತ ದಾಳಿಯು ವ್ಯರ್ಥವಾಗಲು...
ವ್ಯೆರಿ ಚಿಂತೆಯಲಿ ಬಸವಳಿದ,
ದಾರಿಕಾಣದೆ ಮಂಕಾದ...

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ಗೂಢಚಾರರು ಅಲೆದು ಬಂದರು,
ಹೈದಾರಾಲಿಗೆ ವಿಷಯ ತಂದರು...
ಚಿತ್ರದುರ್ಗದ ಕೋಟೆಯಲಿ,
ವಾಯುವ್ಯ ದಿಕ್ಕಿನೆಡೆ ನೋಡು ಎಂದರು...
ಕಳ್ಳಗಂಡಿಯ ತೋರಿದರು, ಲಗ್ಗೆ ಹತ್ತಲು ಹೇಳಿದರು....

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

( ಓ ಸರ್ದಾರ.......)

ಕೈಗೆ ಸಿಕ್ಕಿದ ಓನಕೆ ಹಿಡಿದಳು,
ವೀರ ಗಜ್ಜೇಯ ಹಾಕಿ ನಿಂದಳು...
ದುರ್ಗಿಯನ್ನು ಮನದಲ್ಲಿ ನೆನೆದಳು,
ಕಾಳಿಯಂತೆ ಬಲಿಗಾಗಿ ಕಾದಳು...
ಯಾರವಳು ಯಾರವಳು, ವೀರ ವನಿತೆ ಆ ಓಬವ್ವಾ...
ದುರ್ಗವು ಮರೆಯದ ಓಬವ್ವಾ....

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ತೆವಳುತ ಒಳಗೆ ಬರುತಿದೆ ವೈರೀ,
ಓನಕೆಯ ಬೀಸಿ ಕೊಂದಳು ನಾರಿ...
ಸತ್ತವನನ್ನು ಎಳೆದು ಹಾಕುತಾ,
ಮತ್ತೇ ನಿಂತಳು ಹಲ್ಲು ಮಸೆಯುತಾ...
ವೈರಿ ರುಂಡ ಚೆಂಡಾಡಿದಳು,
ರಕುತದ ಕೋಡಿ ಹರಿಸಿದಳು....

ಕನ್ನಡ ನಾಡಿನ ವೀರರಮಣಿಯ,
ಗಂಡು ಭೂಮಿಯ ವೀರ ನಾರಿಯ,
ಚರಿತೆಯ ನಾನು ಹಾಡುವೆ...

ಸತಿಯ ಹುಡುಕುತ ಕಾವಲಿನವನು,
ಗುಪ್ತಧ್ವಾರದ ಬಳಿಗೆ ಬಂದನೂ....
ಮಾತು ಬರದೆ ಬೆಚ್ಚಿ ನಿಂತನೂ,
ಹೆಣದ ರಾಶಿಯ ಬಳಿಯ ಕಂಡನು....
ರಣಚಂಡಿ ಅವತಾರವನು,
ಕೋಟೆ ಸಲುಹಿದ ತಾಯಿಯನು...

( ಹೈದರಾಲಿಯ ಸೈನ್ಯ ನಮ್ಮ ಕೋಟೆಯನ್ನು ಮುತ್ತಿದೆ,
ಹೋಗಿ ರಣಕಹಳೆಯನ್ನು ಊದಿ...)

ರಣ ಕಹಳೆಯನು ಊದುತಲಿರಲೂ,
ಸಾಗರದಂತೆ ಸೈನ್ಯ ನುಗ್ಗಲೂ...
ವೈರಿಪಡೆಯು ನಿಷೇಶವಾಗಲೂ,
ಕಾಳಗದಲ್ಲಿ ಜಯವನು ತರಲೂ....
ಅಮರಳಾದಳು ಓಬವ್ವ.. ಅಮರಳಾದಳು ಓಬವ್ವ...

No comments:

Post a Comment

ಕನ್ನಡ SSLC SCORING PACKAGE

  ಕೇವಲ 35 ಪುಟದಲ್ಲಿ ಕನ್ನಡ SCORING PACKAGE 2022-23