ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು


ಚಿತ್ರ: ಆಕಸ್ಮಿಕ 
ಹಾಡಿದವರು: ಡಾ|| ರಾಜಕುಮಾರ್ 




ಹೆ ಹೆ . . . . . ಬಾಜೂ . . . .ಲಾರಾ ಟಕಟಕಟ . . . ಲಾರಾ ಟಕಟಕಟ . . . ಲಾರಾ ಟಕಟಕಟ . . . ಹೆ ಹೆ . .

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು,
ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು ಬದುಕಿದು ಜಟಕಾಬಂಡಿ ,
ಇದು ವಿಧಿ ಓಡಿಸುವ ಬಂಡಿ,
ಬದುಕಿದು ಜಾಟಕಬಂಡಿ ವಿಧಿ ಅಲೆದಾಡಿಸುವ ಬಂಡಿ || ಹುಟ್ಟಿದರೆ . . ||

ಕಾಶಿಲಿ ಸ್ನಾನ ಮಾಡು, ಕಾಶ್ಮೀರ ಸುತ್ತಿ ನೋಡು,
ಜೋಗದ ಗುಂಡಿ ಒಡೆಯ ನಾನೆಂದೂ ಕೂಗಿ ಹಾಡೂ
ಅಜಂತಾ ಎಲ್ಲೋರನ ಬಾಳಲ್ಲಿ ಒಮ್ಮೆ ನೋಡು,
ಬಾದಾಮಿ ಈಹೊಳೆಯ ಚಂದನ ತೂಕ ಮಾಡು
ಕಳಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಬಾಷೆ ಕನ್ನಡ . . ಕನ್ನಡ. . ಕಸ್ತೂರಿ ಕನ್ನಡ ||ಹುಟ್ಟಿದರೆ ||



ಧ್ಯಾನಕ್ಕೆ ಭೂಮಿ ಇದು , ಪ್ರೇಮಕ್ಕೆ ಸ್ವರ್ಗ ಇದು,
ಸ್ನೇಹಕ್ಕೆ ಶಾಲೆ ಇದು , ಜ್ನಾನಕ್ಕೆ ಪೀಟ ಇದು
ಕಾರ್ಯಕ್ಕೆ ಕಲ್ಪ ಇದು, ಶಿಲ್ಪಕ್ಕೆ ತಲ್ಪ ಇದು ,
ನಾಟ್ಯಕ್ಕೆ ನಾಡಿ ಇದು ನಾನಾ೦ತರಂಗವಿದು
ಕುವೆಂಪು ಬೇಂದ್ರೆಯಿಂದ ಕಾರಂತ ಮಾಸ್ತಿ ಇಂದ ಧನ್ಯವೀ ಕನ್ನಡ, ಗೋಕಾಕಿನಾ ಕನ್ನಡಾ. . || ಹುಟ್ಟಿದರೆ||

ಬಾಳಿನ ಬೆನ್ನು ಹತ್ತಿ, ನೂರಾರು ಊರು ಸುತ್ತಿ,
ಏನೇನೋ ಕಂಡಮೇಲು ನಮ್ಮೂರೇ ನಮಗೆ ಮೇಲೂ
ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು,
ದಾಸರ ಕಂಡ ನಮಗೆ ವೈಕುಂಠ ಯಾಕೆ ಬೇಕು
ಮುಂದಿನ ನನ್ನ ಜನ್ಮ ಬರೆದಿಟ್ಟನಂತೆ ಬ್ರಹ್ಮಾ ಇಲ್ಲಿಯೇ, ಇಲ್ಲಿಯೇ, ಎ೦ದಿಗು ನಾನಿಲ್ಲಿಯೇ. . ||ಹುಟ್ಟಿದರೆ ||
Comments